ರೆಡ್ ಡ್ರೆಸ್ ಹಿಂದೆ ಬಿದ್ದಿರುವ ಸ್ಯಾಂಡಲ್ ವುಡ್ ನಾಯಕಿಯರು | ಯಾಕೆ? | Filmibeat Kannada

2017-11-28 3

ಸ್ಯಾಂಡಲ್ ವುಡ್ ನಾಯಕಿಯರಿಗೇಕೆ ಈ ಡ್ರೆಸ್ ಮೇಲೆ ಅಷ್ಟೊಂದು ಮೋಹ? ಸಿನಿಮಾ ನಾಯಕಿಯರಿಗಷ್ಟೇ ಅಲ್ಲ... ಸಾಮಾನ್ಯವಾಗಿ ಹುಡುಗಿಯರಿಗೆ ಹೊಸ ಸ್ಟೈಲ್ ಡ್ರೆಸ್ ಗಳು ಅಂದ್ರೆ ಎಲ್ಲಿಲ್ಲದ ಪ್ರೀತಿ. ಇನ್ನೂ ನಾಯಕಿಯರು ಅಂದ್ರೆ ಸಾಮಾನ್ಯ ಜನರಿಗಿಂತಲೂ ಹೆಚ್ಚಾಗಿಯೇ ಇರುತ್ತೆ. ಲಕ್ಷಾಂತರ ಜನರು ಪ್ರತಿನಿತ್ಯ ಸ್ಟಾರ್ ಹೀರೋಯಿನ್ ಗಳನ್ನ ಫಾಲೋ ಮಾಡುತ್ತಿರುತ್ತಾರೆ. ಅದರಿಂದ ನಾಯಕಿಯರು ಯಾವಾಗಲೂ ವಿಶೇಷವಾಗಿ ವಿಭಿನ್ನವಾಗಿ ಕಾಣಿಸಿಕೊಳ್ಳಬೇಕಾಗುತ್ತೆ. ನಾಯಕಿಯರು ಸಿನಿಮಾದಲ್ಲಾಗಲಿ ಅಥವಾ ಖಾಸಗಿ ಕಾರ್ಯಕ್ರಮದಲ್ಲಾಗಲಿ ಧರಿಸುವ ಉಡುಪನ್ನ ಸಾಕಷ್ಟು ಜನರು ಗಮನಿಸಿರುತ್ತಾರೆ. ನಾಯಕಿಯರನ್ನ ಫಾಲೋ ಮಾಡುವುದರ ಜೊತೆಯಲ್ಲಿ ಅವರ ಸ್ಟೈಲ್ ಕಾಪಿ ಮಾಡುವ ಅದೆಷ್ಟೋ ಅಭಿಮಾನಿಗಳು ಇದ್ದೇ ಇರ್ತಾರೆ. ಈಗ ಡ್ರೆಸ್ ಗಳ ಬಗ್ಗೆ ನಾವು ಇಷ್ಟೆಲ್ಲ ಹೇಳಲು ಕಾರಣ ಕನ್ನಡ ಸಿನಿಮಾದ ಮೂರು ನಾಯಕಿಯರು ಒಂದೇ ಡ್ರೆಸ್ ಹಿಂದೆ ಬಿದ್ದಿದ್ದಾರೆ.! ಆಸೆ ಪಟ್ಟಿದ್ದರೆ ಓಕೆ, ಆದರೆ ಮೂವರು ಅದೇ ಡ್ರೆಸ್ ನ ಧರಿಸಿ ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರೆ. ಯಾರು ಆ ಮೂವರು ನಾಯಕಿಯರು ಅಂದ್ರಾ.?


In pics: Kannada Actress Rachita Ram, Manvitha Harish and Sruthi Hariharan sizzles in the similar outfit.

Videos similaires